ತುಂಬಾ ದಿನಗಳಿಂದ ನನ್ನ ಸ್ನೇಹಿತರು ಯಾಕೆ ಬ್ಲೋಗ್ ನಲ್ಲಿ ಏನು ಹೊಸದಾಗಿ ಬರೆದಿಲ್ಲ, ಯಾಕೆ ಬ್ಲೋಗ್ update ಮಾಡೋದು ನಿಲ್ಲಿಸಿಬಿಟ್ಟಿರುವೆ ಎಂದು ಕೇಳ್ತಾನೇ ಇದ್ದಾರೆ. ಇನ್ನೂ ಕೆಲವರು ಮದುವೆ ಆದ ನಂತರ ಬ್ಲೋಗ್ ಮೇಲೆ interest ಹೋಗಿದೆಯೇ ಎಂದು ಕೇಳಿದ್ರೆ ಇನ್ನೂ ಕೆಲವರು ಮದುವೆ ಆದ ಮೇಲೆ full busy ಹಾಗಿಬಿಟ್ಟಿರುವೆಯ, ಬ್ಲೋಗ್ ನಲ್ಲಿ ತುಂಬಾ ದಿನಗಳಿಂದ ಏನು ಬರೆದೆ ಇಲ್ಲ ಅಂತ ಕೇಳ್ತಾರೆ.
ನಿಜ, ಬ್ಲೋಗ್ ನ update ಮಾಡಿ ತುಂಬಾ ತಿಂಗಳೇ ಆಗಿದೆ. ಆಗೆಯೆ ಮದುವೆ ಆದ ಮೇಲೆ busy ಅನ್ನೋ ಮಾತಿನಲ್ಲಿ ಪೂರ್ತಿ ಸತ್ಯ ಇಲ್ಲದಿದ್ರೂ ಅದು ಒಂದು ಕಾರಣ ಇದ್ರು ಇರಬಹುದು. ಬೇರೆ ಕಾರಣ ಏನಿರಬಹುದೆಂದರೆ ಯಾವ ವಿಷಯದ ಬಗ್ಗೆ ಬರೆಯೋದು ಅಂತ ತಿಳಿಯದೇ ಇರೋದು. ರಾಜಕೀಯ ನನಗೆ ಅರ್ಥ ಆಗದೆ ಇರೋ ವಿಚಾರ, ಚಿತ್ರಗಳ ವಿಮರ್ಶೆ ಬರೆಯೋದಕ್ಕೆ ಅಂತ ಒಳ್ಳೇ ಚಿತ್ರಗಳು ನಮ್ಮಲ್ಲಿ ಸದ್ಯಕ್ಕೆ ಬಂದಿಲ್ಲ. ಇನ್ನ ನನ್ನದೇ ಯಾವುದಾದರೋ experience ಬಗ್ಗೆ ಬರೆಯೋಣ ಅಂದ್ರೆ ಸದ್ಯಕ್ಕೆ ಯಾವುದು ನೆನಪಾಗುತ್ತಿಲ್ಲ ಆಗೆಯೇ ಯಾವ ವಿಷಯದ ಬಗ್ಗೆ ವಿಮರ್ಶೆ ಮಾಡೋಣ ಎಂದು ಕೂಡ ಗೊತ್ತಾಗುತ್ತಿಲ್ಲ. ಹೋಗಲಿ ಹೀಗ ತಾನೆ ಮದುವೆ ಆಗಿ ಹೊಸ ಜೀವನ ಶುರು ಮಾಡಿರುವುದರ ಬಗ್ಗೆ ಬರೆಯೋಣ ಅಂದ್ರೆ ನಿಜಕ್ಕೂ ಏನು ಬರೆಯೋದು ಅಂತ ಅಷ್ಟು ತಿಳಿಯುತ್ತಿಲ್ಲ...
ಜೀವನ ಚೆನ್ನಾಗಿದೆ, ಮೊದಲು ನಾನೊಬ್ಬಳೇ, ಹೀಗ ನನ್ನ ಸುಖ ದು:ಖ್ಖ ಅಂಚಿಕೊಳ್ಳಲು ಒಬ್ಬ ಸಂಗಾತಿ ನನ್ನ ಜೊತೆ ಇದ್ದಾರೆ. ನನಗೆ ಏನೇ ಬೇಕೆಂದರು ಅಥವಾ ಏನೇ ಹೇಳಬೇಕೆಂದರು ಇವರ ಬಳಿ ಹೇಳಬಹುದು. ಮದುವೆಯ ಮೂಲಕ ನನಗೆ ಒಳ್ಳೆಯ ಸ್ನೇಹಿತ, ಒಳ್ಳೆಯ ಬಾಳಸಂಗಾತಿ ದೊರಕಿದ್ದಾರೆ. ಮೊದಲು ಅಂತ ಜವಭ್ದಾರಿ ಅಂತ ಏನು ಇರಲಿಲ್ಲ, ಹೀಗ ಒಂದೊಂದಾಗಿ ಹೊಸ ಜವಭ್ದಾರಿಗಳು ಶುರು ಆಗಿದೆ. ಒಂದಂತೂ ನಿಜ, ಮದುವೆಗಿಂತ ಮುಂಚೆ ಜೀವನ ಒಂದು ರೀತಿ ಚೆನ್ನಾಗಿದ್ದರೆ ಮದುವೆ ಆದ ಮೇಲೆ ಮತಷ್ಟು ಚೆನ್ನಾಗಿದೆ. ಹೊಸ ಜೀವನ ಶುರುವಾಗಿದೆ, ಬಹಳ ಸೊಗಸಾಗಿದೆ. ಮದುವೆ ಜೀವನ ಏಗೆ ಅನ್ನೋದು ಮದುವೆ ಆದ ಮೇಲೆ ಮಾತ್ರ ತಿಳಿಯೋದು, ಅದು ನಾನು ಹೇಳುವುದರಿಂದ ಅಥವಾ ಬೇರೆಯವರು ಹೇಳುವುದರಿಂದ ಪ್ರಯೋಜನವಿಲ್ಲ. ಸರಿ ಅದು ಬಿಡಿ, ಒಂದಂತೂ ನಿಜ, ನೀವು ಮದುವೆ ಆದ ಮೇಲೆ ನಿಮ್ಮ ಇಂದೆ ಮುಂದೆ ಸುತ್ತವ ಪ್ರಶ್ನೆ ಒಂದೆ, ಸ್ನೇಹಿತರಾಗಲಿ ಅಥವಾ ಸಂಭಂದಿಕರಾಗಲಿ ಎಲ್ಲರೂ ನಿಮ್ಮನ್ನು ಕೇಳುವ ಪ್ರಶ್ನೆ ಒಂದೇ, ಮದುವೆ ಜೀವನ ಹೇಗಿದೆ? Howz your married life?
ಇನ್ನು ನಿತ್ಯ ದಿನಚರಿಯ ಬಗ್ಗೆ ಬರೆಯಲು ಏನು ಹೊಸದು ಇಲ್ಲ, ಎಲ್ಲ ಸಾಫ್ಟ್ವೇರ್ ಇಂಜನಿಯರ್ ಗಳ ಜೀವನದಂತೆ - ಆಫೀಸ್ ಹೋಗೋದು, ಕೋಡ್ ಬರೆಯೋದು, CQs ಫಿಕ್ಸ್ ಮಾಡೋದು, ಮೀಟಿಂಗ್ಸ್ ಅಟೆಂಡ್ ಮಾಡೋದು, ನೆಟ್ ಬ್ರೌಸ್ ಮಾಡೋದು, ಸ್ನೇಹಿತರೊಡನೆ ಹರಟೆ ಹೊಡೆಯೋದು,ತೀರ ಬೋರ್ ಆದ್ರೆ ಗೇಮ್ಸ್ ಆಡಿಕೊಂಡು ಕುರೋದು. ಒಟ್ಟಿನಲ್ಲಿ ಅದೇ ಆಫೀಸ್, ಅದೇ ಕೆಲಸ ಇದ್ರಲ್ಲಿ ಏನು ಬದಲಾವಣೆ ಇಲ್ಲ.
ಬ್ಲೋಗ್ ನಲ್ಲಿ ಏನು ಬರೆಯೋದು ಅಂತ ತಿಳಿಯದೇ ಸರಿ ಯಾಕೆ ಬರೀತಿಲ್ಲ ಅನ್ನೋ ಕಾರಣನೆ ಬರೆಯೋಣ ಅಂತ ಈ ವಿಷಯ ಬರೆದೆ:) ನಿಜ ಹೇಳಬೇಕೆಂದರೆ ಮನಸ್ಸಿದ್ದರೆ ಯಾವ ವಿಷಯದ ಬಗ್ಗೆ ಬೇಕಾದರೂ ಬರೆಯಬಹುದು, ಬೇಕಾದಷ್ಟು ಮಾತು ಆಡಬಹುದು. ಇದ್ದೆಲ್ಲ ನಾನು ಕೊಡುತ್ತಿರುವ ಬರಿ ಮಾತಿನ ಕಾರಣಗಳು, ಮುಖ್ಯ ಕಾರಣ ನನ್ನ ಸೋಂಬೇರಿತನ, ಇದಕಿಂತ ದೊಡ್ಡ ಕಾರಣ ಬೇರೆ ಯಾವುದು ಇಲ್ಲ ಎಂದು ನನ್ನ ಅನಿಸಿಕೆ.