Thursday, February 28, 2008

D.L ಎಲ್ಲಿ ಸಾರ್....[F.I.R ಸಂಚಿಕೆ]

[­ಸೂಚನೆ: ­ಇದು ­ನನ್ನ ­ಮೊದಲನೆ ­­ಲೇಖನ. ­­ತಪ್ಪಿದ್ದಲ್ಲಿ ­ಕ್ಷಮೆ ­ಇರಲಿ]

ಕೊಲೆ, ಮೋಸ, ದರೋಡೆ... ಎಲ್ಲಿ ನೋಡಿದರು ಬರೀ ಇದೆ ಸುದ್ದಿಗಳು. ಹೀಗಂತು ಎಲ್ಲಾ ಚ್ಯಾನೆಲ್ ಗಳಲ್ಲು ಇದರ ಬಗ್ಗೆ ಒಂದು ಕಾರ್ಯಕ್ರಮವನ್ನೇ ಶುರುಮಾಡಿದ್ದಾರೆ. ಉದಯ ಟಿ.ವಿ ಯಲ್ಲಿ ಕ್ರೈಮ್ ಸ್ಟೋರಿ, ಟಿ.ವಿ 9 ನಲ್ಲಿ ವಾರೆಂಟ್, ಈ ಟಿ.ವಿ ಯಲ್ಲಿ ಕ್ರೈಮ್ ಡೈರಿ, ಸುವರ್ಣ ಚ್ಯಾನೆಲ್ ನಲ್ಲಿ F.I.R. ನಮ್ಮ ಮನೆಯಲ್ಲಿ ಕೆಲವೊಮ್ಮೆ ಈ ಕಾರ್ಯಕ್ರಮಗಳನ್ನು ನೋಡುತ್ತಿರುತ್ತಾರೆ. ನಾನಂತು ಇದನೆಲ್ಲ ಯಾಕಾದರೋ ತೋರಿಸುತ್ತಾರೋ, ­ಇವರಿಗೆ ­ಬೇರೆ ­ಏನು ­ಸಿಗುವುದಿಲ್ಲವೇ ­ಅಂತ ­ಮನಸಿನಲ್ಲೇ ­ಇದನ್ನು ­ತೋರಿಸುವರಿಗೆ ­ಶಾಪವಾಕುತ್ತಿರುತ್ತೇನೆ. ­ಇಂತ ­ಯಾವುದೆ ­ಕಾರ್ಯಕ್ರಮ ­ಬಂದರೆ ಅಲ್ಲಿಂದ ­ಎದ್ದು ­ನನ್ನ ­ರೂಮ್ ­ಗೆ ­ಹೋಗುತ್ತೇನೆ. ­ಆದರೆ ­ಮೊನ್ನೆ F.I.R ನಲ್ಲಿ ಒಂದು ­ಹೊಸದಾದ ­ವಿಷಯದ ­ಬಗ್ಗೆ ­ತೋರಿಸಿದರು. ­ಅದು ­ಏನು ­ಗೊತ್ತೆ - ­ ಸಾಮಾನ್ಯ ­ಜನರು ­Driving ­License ­ಇಲ್ಲದೆ ­ವಾಹನ ಚಲಿಸುತ್ತಿದ್ದರೆ ­ಅಥವಾ ­No ­Parking ­ಸ್ಥಳದಲ್ಲಿ ­ವಾಹನ ­ನಿಲ್ಲಿಸಿದರೆ ­ನಮ್ಮ ­so ­called ­Traffic ­Police ­ಮಾಡುವುದು ­ಏನು? ­Fine ­ಹಾಕುವುದು ­ಅಥವಾ ­Something(­ಲಂಚಾ) ­ತಗೊಂಡು ­ಅವರನ್ನು ಬಿಡುವುದು. ­ಇದು ­ಎಲ್ಲರಿಗೂ ­ಗೊತ್ತಿರುವುದೆ. ­ಆದರೆ ­ಈ ­ಸಂಚಿಕೆಯಲ್ಲಿ ­different ­ಏನು ­ಗೊತ್ತೆ - ­ನಮ್ಮ ­so ­called ­ಟ್ರ್ಯಾಫಿಕ್ ­ಪೋಲೀಸ್ ­ಕೂಡ ­Rules ­And ­Regulations ­follow ­ಮಾಡ್ತಾರ? ­ಅವರ ­ಬಳಿ ­D.L ಇರುತ್ತದೆಯೇ? ­ಅವರು ­No ­Parking ­ಸ್ಥಳದಲ್ಲಿ ­ವಾಹನ ­ನಿಲ್ಲಿಸುತ್ತಾರಾ? ಈ ­ವಿಷಯದ ­ಮೇಲೆ ­F.I.R ­ತಂಡದವರು ­ಮಾಡಿದ ­ತನಿಕೆ ­ಪ್ರಕಾರ ­ಶೇಕಡ 100 ­ಕ್ಕೆ 70 ­ರಷ್ಟು ­ಜನರು (­ಟ್ರ್ಯಾಫಿಕ್ ­Police ­ಮತ್ತು ಸರ್ಕಾರಿ ­ವಾಹನ ­ಚಲಿಸುವವರು) ­No ­Parking ­ಸ್ಥಳದಲ್ಲಿ ­ವಾಹನ ­ನಿಲ್ಲಿಸಿದವರು, ­D.L ­ಇಲ್ಲದೆ ­ವಾಹನ ­ಚಲಿಸುವವರು. ಸಂಚಿಕೆ ­Topic ­ಕೇಳಿ ­­ಈ ­ಕಾರ್ಯಕ್ರಮವನ್ನು ­ನೋಡಲೇಬೇಕೆಂದು ­ನಿರ್ಧರಿಸಿ ­ಟಿ.­ವಿ ಮುಂದೆ ­ಕುಳಿತೆ.

F.I.R ­ತಂಡದವರು ­ಹಲವಾರು ­ಟ್ರ್ಯಾಫಿಕ್ ­ಪೋಲೀಸ್­ ರ ­ಬಳಿ ­ಹೋಗಿ ­D.L ­ತೋರಿಸಲು ­ಕೇಳಿದರು. ­ಅಬ್ಬಬ್ಬ, ­ಅದಕ್ಕೆ ­ಅವರು ­ಕೊಟ್ಟ ­ಉತ್ತರ, ­ಕಾರಣ ­ಕೇಳಬೇಕು. ­ಕೆಲವು ­ನಿದರ್ಶನಗಳು ­ಹೀಗಿವೆ. ­ಮೊದಲಿಗೆ ­ಮಲ್ಲೇಶ್ವರಾಂ ­ಟ್ರ್ಯಾಫಿಕ್ ­ಪೋಲೀಸ್ ­ನವರನ್ನ ­D.L ­ತೋರಿಸಲು ­F.I.R ತಂಡದವರು ಕೇಳಿದರೆ ­ಅವರು ­ಕೊಟ್ಟ ­ಉತ್ತರ '­ಇಲ್ಲ ­Sir, ­ಮನೆಯಲ್ಲಿ ­ಮರೆತು ­ಬಿಟ್ಟು ­ಬಂದಿದ್ದೇನೆ' ­ಎಂದು. ­ಇನ್ನೊಬ್ಬ ­ಪೋಲೀಸ್ ­ನ ­ಕೇಳಿದರೆ ­D.L ­ಇದೆ ­ಸಾರ್, ­ಅದು ­ಇಲ್ಲದೆ ­ನಮಗೆ ­ಸರ್ಕಾರದವರು ­ವಾಹನ ­ಕೊಡುವುದಿಲ್ಲ ­ಎಂದು ­ಹೇಳಿದರು. ­O.K ­ಸ್ವಾಮಿ ­D.L ­ತೋರಿಸಿ ­ಎಂದರೆ ­Station ­ನಲ್ಲಿ ­ಇದೆ ­ಎಂದರು. ­ಸಾಮಾನ್ಯ ­ಜನರು ­ಹೀಗೆ ­ಉತ್ತರ ­ಕೊಟ್ಟರೆ ­ಸುಮ್ಮನೆ ­ಬಿಡ್ತೀರಾ ­ಸರ್ ­ಅಂತ ­ಕೇಳಿದರೆ ­ಅದಕ್ಕೆ ­ನಮ್ಮ ­ಪೋಲೀಸ್ ­ಕೊಟ್ಟ ­ಉತ್ತರ - '­Station ­ಗೆ ­D.L ­ತಂದು ­ತೋರಿಸಲು ­­ಹೇಳ್ತಿವಿ, ­ತಂದು ­ತೋರಿಸಿದರೆ ­ಫೈನ್ ­ಹಾಕದೆ ­ಬಿಟ್ಟುಬಿಡುತ್ತೇವೆ' ­ಅಂತ. ­ಅದು ­ಎಷ್ಟು ­ಮಟ್ಟಿಗೆ ­ನಿಜವೋ, ­ಸುಳ್ಳೋ ­ಎಲ್ಲರಿಗೂ ­ಗೊತ್ತು. ಆರ್. ­ಟಿ ­ನಗರ್ ­ಟ್ರ್ಯಾಫಿಕ್ ­ಪೋಲೀಸ್ ­ಮಲ್ಲೇಶ್ವರಾಂ ­ಸ್ಟೇಶನ್ ­ಗೆ ­ಬರ್ತಿದ್ರು. ­ಅವರನ್ನ ­ಡಿ. ­ಎಲ್ ­ತೋರಿಸಲು ­ಕೇಳಿದ್ದಕ್ಕೆ ­ಆರ್. ­ಟಿ ­ನಗರ್ ­ಸ್ಟೇಶನ್ ­ನಲ್ಲಿ ­ಪರ್ಸ್ ­ಬಿಟ್ಟಿದೀನಿ, ­ಈಗ ­ಅರ್ಜೆಂಟ್ ­ಮೀಟಿಂಗ್ ­ಇದೆ ­ಅಂತ ­ಹೇಳುತ್ತಾ ­ನಿಲ್ಲದೇ ­ಹೊರಟೆ ­ಬಿಟ್ಟರು. ­ಆದರೆ ­ಅವರು ­ಸ್ವಲ್ಪ ­ಮುಂದೆ ­ಹೋಗಿ ­ಜೇಬಿನಿಂದ ­ಪರ್ಸ್ ­ತೆಗೆದುದನ್ನು ­ಚ್ಯಾನೆಲ್ ­ನವರು ­ಮತ್ತೆ ­ಮತ್ತೆ ­ತೋರಿಸುತ್ತಿದ್ದರು. ಮಾತೊಬ್ಬ ­ಟ್ರ್ಯಾಫಿಕ್ ­ಪೋಲೀಸ್ ­ಕಥೆ ­ಕೇಳಿ. ಮಾಗಡಿ ­ಟ್ರ್ಯಾಫಿಕ್ ­ಪೋಲೀಸ್ ­ವಿಜಯನಗರದ ­ಬಳಿ ­ನೋ ­ಪಾರ್ಕಿಂಗ್ ­ಸ್ಥಳದಲ್ಲಿ ­ವಾಹನವನ್ನು ­ನಿಲ್ಲಿಸಿದ್ದರು. ­F.I.R ­ನವರು '­ಏನಿದು ­ಸರ್, ­ನೋ ­ಪಾರ್ಕಿಂಗ್ ­ನಲ್ಲಿ ­ವಾಹನ ­ನಿಲ್ಲಿಸಿದ್ದೀರಾ ­ಸರಿಯೇ' ­ಎಂದು ­ಕೇಳಿದ್ದಕ್ಕೆ ­ಅವರು ­ಹೇಳಿದ್ದು '­ಹೌ ­ದು ­ಸರ್ ­ನಿಲ್ಲಿಸಬಾರದು, ­ಇದು ­ತಪ್ಪೇ,­ಆದರೆ ­ಜಸ್ಟ್ 2 ­ನಿಮಿಷದ ­ಕೆಲಸವಿತ್ತು ­ಅಷ್ಟೇ, ­ಅದಕ್ಕೆ ­ನಿಲ್ಲಿಸಿದ್ದೆ'. ­­F.I.R ­ನವರು '­ನಾವು ­ಆಗಾದರೆ ­ನಿಲ್ಲಿಸಬಹುದೆ' ­ಎಂದು ­ಕೇಳಿದರೆ '­ಬೇಡ ­ಸರ್ ­ಪ್ಲೀಸ್, ­ಆಗೇ ­ಮಾಡಬೇಡಿ' ­ಎಂದು ­ಹೇಳಿದರು. ­ಹೋಗ್ಲಿ ­D.L ­ತೋರಿಸಿ ­ಅಂದರೆ '­ನೆನ್ನೆ ­ಮಳೆ ­ಬಂತಲ್ಲ ­ಸರ್, ­ಶರ್ಟ್ ­ನೆನೆದಿತ್ತು ­ಅದರಲ್ಲೇ ­D.L ­ಸೇರಿಕೊಂಡಿದೆ' ­ಅಂತ ­ಕಾರಣ ­ಕೊಡಲು ­ಶುರು ­ಮಾಡಿದರು. ­ಅಷ್ಟರಲ್ಲಿ ­ಅಲ್ಲೇ ­ಇದ್ದ ­ಒಬ್ಬ ­ವ್ಯಕ್ತಿ '­ಎನ್ ­ಸರ್, ­ಇದು ­ಸರಿನಾ, ­ಕಳೆದ ­ವಾರ ­ನಾನು ­helmet ­ಹಾಕಿಲ್ಲ ­ಅಂತ ­ಇದ್ದ 50 ­ರೂಪಾಯಿಯನ್ನು ­ಕಿತ್ತುಕೊಂಡಿರಿ, ­ಈಗ ­ನಿಮಗೆ ­ಏನು ­ಮಾಡಬೇಕು' ­ಎಂದು ­ಕೇಳಿದನು. ­ಆ ­ಟ್ರ್ಯಾಫಿಕ್ ­ಪೋಲೀಸ್ '­ಇವತ್ತು ­ಬೆಳಗೆ ­ಯಾರ ­ಮುಖ ­ನೋಡಿದೆನೋ ­ಏನೋ, ­ನನ್ನ 12 ­ವರ್ಷದ ­ಸರ್ವಿಸ್ ­ನಲ್ಲಿ ­ಯಾವತ್ತೂ ­ಈ ­ರೀತಿ ­ಹಾಗಿರಲಿಲ್ಲ' ­ಎಂದು ­ಹೇಳಿಕೊಂಡು ­ಅಲ್ಲಿಂದ ­ಜಾಗ ­ಕಾಲಿ ­ಮಾಡಿದರು.

ನಮ್ಮ ­ಟ್ರ್ಯಾಫಿಕ್ ­ಇಲಾಖೆಯಲ್ಲಿ ­ಕೆಲವರು ­ಒಳ್ಳೆಯವರೂ ­ಇದ್ದಾರೆ. ­ರಾಜಾಚಾರಿ, ­S.I ­ಅವರನ್ನ ­D.L ತೋರಿಸಲು ­ಕೇಳಿದಾಗ ­ತಕ್ಷಣ ­ತೆಗೆದು ­ತೋರಿಸಿ '­ನಾವು ­ಫರ್ಸ್ಟ್ ­ಸರಿ ­ಇರಬೇಕಲ್ಲವೇ ­ಸರ್, ­ಬೇರೆಯವರನ್ನ ­check ­ಮಾಡೋ ­ಮೊದಲು ­ನಾವು ­ರೂಲ್ಸ್ ­ಅಂಡ್ ­ರೆಗ್ಯುಲೇಶನ್ಸ್ ­ಫಾಲೊ ­ಮಾಡ್ಬೇಕು, ­ನಾವೇ D.L ­ಇಲ್ಲದೆ ­ಬೇರೆಯವರನ್ನ ­ತೋರಿಸಲು ­ಕೇಳೋದು ­ಯಾವ ­ಮಟ್ಟಿಗೆ ­ಸರಿ ­ಅಲ್ವಾ' ­ಎಂದು ­ಹೇಳಿದರು. ­­­ಏಗೋ ­ಸದ್ಯ ಕೆಲವರಾದರೋ ­ರೂಲ್ಸ್ ­ಅಂಡ್ ­ರೆಗ್ಯುಲೇಶನ್ಸ್ ­ಫಾಲೊ ಮಾಡುವವರಿದ್ದಾರಲ್ಲ.
.
ಇದು ­ಟ್ರ್ಯಾಫಿಕ್ ­ಪೋಲೀಸ್ ­ಕಥೆಯಾದರೆ, ­ಸರ್ಕಾರಿ ­ವಾಹನ ­ಚಲಿಸುವವರು ­ಹೇಗೆ? ­ಅದನ್ನೂ ­F.I.R ­ನವರು ­ತೋರಿಸಿದರು. ­ ತೊಟಾಗಾರಿಕೆ ­ಇಲಾಖೆ ­ವಾಹನ ­ಚಾಲಕನನ್ನು ­D.L ­ತೋರಿಸಲು ­ಕೇಳಿದರೇ, ­ಆಫೀಸ್ ­ನಲ್ಲಿ ­ಇದೆ ­ಸರ್ ­ಎಂದು ­ಉತ್ತರಿಸಿದನು. ಪೋಲೀಸ್ ­ಇಲಾಖೆ ­ವಾಹನ ­ಚಾಲಕನನ್ನು ­D.L ­ಕೇಳಿದರೆ '­ಇದೆ ­ಸರ್, ­ಇದೆ' ­ಎಂದು ­ಹೇಳುತ್ತಲ್ಲೇ ­ಗಾಡಿ ­ನಿಲ್ಲಿಸದೇ ­ಹೊರಟೆ ­ಹೋದನು. ­ನಮ್ಮ ­ಹೈ ­ಕೋರ್ಟ್ ­ಜಡ್ಜ್ ­ರವರ ­ವಾಹನ ­ಚಾಲಕನು ­ಕೂಡ ­D.L ­ಇಲ್ಲದೆ ­ವಾಹನ ­ಚಲಿಸುತ್ತಿದ್ದನು. ­ಪ್ರಶ್ನಿಸಿದ್ದಕ್ಕೆ '­I.D ­ಕಾರ್ಡ್ ­ಇದ್ರೆ ­ಸಾಕು ­ಸಾರ್, ­D.L ­ಏನು ­ಬೇಕಿಲ್ಲ' ­ಎಂದು ­ಹೇಳಿದನು. ­­ACP ­ಮನೋಹರ್ ­ಅವರ ­ವಾಹನ ­ಚಾಲಕನನ್ನು ­D.L ­ತೋರಿಸಲು ­ಕೇಳಿದರೆ ­ಯಾವುದೋ ­ಹಸಿರು ­ಬಣ್ಣದ ­ಚಿಕ್ಕ ­ಡೈ ­ರಿ ­ತೋರಿಸಿ ­ಇದೆ ­D.L ­ಎಂದು ­ಹೇಳಿದನು. ­ಸರಿಯಾಗಿ ­ತೋರಿಸಿ ­ಅಂದರೆ '­ಇದೆ ­ಸರ್' ­ಎಂದು ­ಮಾತ್ರ ­ಹೇಳುತ್ತಿದ್ದನು, ­ಆದರೆ ­ತೆಗೆದು ­ತೋರಿಸಲಿಲ್ಲ. ­ಅಷ್ಟರಲ್ಲಿ ­ಪಕ್ಕದಲ್ಲಿದ್ದ ­ACP ­ಮನೋಹರ್ ­F.I.R ­ತಂಡದವರನ್ನು ­ಕರೆದು '­D.L ­ಕೇಳುವುದ್ದಕ್ಕೆ ­ಅಂತಾನೆ ­ಕೆಲವರನ್ನು ­ಸರ್ಕಾರ ­ನೇಮಿಸಿದೆ. ­ಯಾರು ­ಬೇಕೋ ­ಅವರು ­ಕೇಳುವುದು ­ಸರಿಯಲ್ಲ. ­ನಿಮಗೆ ­ಕೇಳುವ ­ಅಧಿಕಾರವಿಲ್ಲ' ­ಎಂದು ­ಹೇಳಿದರು. ­ಇಂತ ­ಅಧಿಕಾರಿಗಳಿಗೆ ­ಏನೆಂದು ­ಹೇಳಬೇಕು. ­ಪ್ರೆಸ್, ­ಜರ್ನಲಿಸ್ಟ್ಸ್ ­ಅಷ್ಟೇ ­ಅಲ್ಲ ­ಸಾಮಾನ್ಯ ­ಜನರಿಗೂ ­ಕೇಳುವ ­ಅಧಿಕಾರವಿದೆ ­ಅನ್ನುವುದು ­ಅವರಿಗೆ ­ಯಾರು ­ಹೇಳಬೇಕು. ಇವರದು ­ಈಗೆ ­ಆದರೆ, ಮತ್ತೊಬ್ಬ ­ಪೋಲೀಸ್ ­ಇಲಾಖೆ ­ವಾಹನ ­ಚಾಲಕನನ್ನು ­D.L ­ತೋರಿಸಲು ­ಕೇಳಿದರೆ ­ತಕ್ಷಣ ­ತೋರಿಸಿ '­­ನನ್ನ ­ಅಧಿಕಾರಿಯವರು ­strict ­ಆಗಿ ­ಹೇಳಿದ್ದಾರೆ ­ಸರ್, ­D.L ­ಮತ್ತು ­ಎಲ್ಲ ­ಡಾಕ್ಯುಮೆಂಟ್ಸ್ ­ಯಾವಾಗಲು ­ಇಟ್ಟುಕೊಂಡಿರಬೇಕು ­ಎಂದು' ­ಅಂತ ­ಹೇಳಿದನು. ­ನಮ್ಮ ­ACP ­ಮನೋಹರ್ ­ಇದನ್ನು ­ಕಲಿಯಬೇಕು.

F.I.R ­ತಂಡದವರು ­ಈ ­ಸಂಚಿಕೆಯನ್ನು, ­ಈ ­ವಿಷಯವನ್ನು ­ಜನರ ­ಮುಂದೆ ­ತಂದಿರುವುದಕ್ಕೆ ­ಅವರಿಗೆ ­ನನ್ನ ­ವಂದನೆಗಳು. ­ಇನ್ನೂ ­ಮುಂದೆ ­ಟ್ರ್ಯಾಫಿಕ್ ­ಪೋಲೀಸ್ ­ಯಾರನ್ನಾದರೋ ­D.L ­ತೋರಿಸಲು ­ಕೇಳಿದರೆ ­ಮೊದಲು ­ನಿಮ್ಮ ­D.L ­ತೋರಿಸಿ ­ಎನ್ನುತ್ತಾರೇನೋ. ­ಈ ­ಸಂಚಿಕೆಯಲ್ಲಿ ­ತೋರಿಸಿರುವ ­ಟ್ರ್ಯಾಫಿಕ್ ­ಪೋಲೀಸ್ ­ಗಳು, ­ಇದನ್ನು ­ನೋಡಿರುವರು ­ಇನ್ನೂ ­ಮುಂದೆ ­ವಾಹನ ­ಚಲಿಸುವಾಗ ­ತಪ್ಪದೇ ­ಎಲ್ಲಾ ­ಡಾಕ್ಯುಮೆಂಟ್ಸ್ ­ಗಳನ್ನು ­ತಮ್ಮೊಡನೆ ­ಇಟ್ಟುಕೊಂಡಿರುತ್ತಾರೆ ­ಎಂದು ­ಬಾವಿಸುತ್ತೇನೆ. ­F.I.R ­ತಂಡದವರು ­ಈ ­ವಿಷಯದ ­ಬೆಗ್ಗೆ ­ಒಂದು ­ಎಪಿಸೋಡ್ ­ನಮ್ಮ ­ಮುಂದೆ ­ತಂದಿರುವುದನ್ನು ­ಪ್ರಶಂಸಿಸುತ್ತೇನೆ.

Tuesday, February 5, 2008

My Inspiration

Always... n... Always... follow your dreams.
Please don't ever let anything set you back...or...lose hope... don't ever lose sight of your dreams.
Sometimes bad things do happen - no one knows why - but they are designed to make you stronger...
So... we have got to learn to always be strong and move on.
So... Always Think BIG...