Sunday, August 24, 2008

ದಾರಿ ಬಿಡ್ರಪ್ಪೋ ಗಾಡಿ ಬಂತು…

ಇಷ್ಟು ದಿನ ಗಾಡಿಯಲ್ಲಿ ಪ್ರಯಾಣಿಸುವಾಗ ನನಗೆ ಯಾವ ಭಯವು ಇರಲಿಲ್ಲ. ಆರಾಮಾಗಿ ಕೂತು ಹೋಗುತ್ತಿದ್ದೆ ಯಾಕೆಂದರೆ ಗಾಡಿ ಚಲಿಸುವವರು ಬೇರೆಯವರಾಗಿರುತ್ತಿದ್ದರು. ಆದರೆ ಅದೇ ಗಾಡಿ ನಾನು ಹೋಡಿಸಬೇಕು ಅಂದರೆ ನನಗೆ ಆಗುತ್ತಿದ್ದ ಭಯ ಅಷ್ಟಿಷ್ಟಲ್ಲ. ದಾರಿಯಲ್ಲಿ ನಡೆಯುವಾಗ ಪಕ್ಕದಲ್ಲಿ ಯಾವುದಾದರೋ ಗಾಡಿ ಸ್ಪೀಡ್ ಆಗಿ ಹೋದರೆ ಸಾಕು, ಭಯವಾಗುತ್ತಿತ್ತು. ಈ ಜನ್ಮದಲ್ಲಿ ನಾನು ಗಾಡಿ ಹೋಡಿಸೋದಿಲ್ಲ, ನನಗೆ ಅಷ್ಟು ಧೈರ್ಯ ಇಲ್ಲ ಎಂದು ಭಾವಿಸಿದ್ದೆ. ನಾನು ಅಂದುಕೊಂಡಂತೆ ಆಗುವುದಾಗಿದ್ದರೆ ಜೀವನ ನನಗೆ ಇಷ್ಟ ಬಂದಂತೆ ಬದಲಿಸಿ ಬಿಡುತ್ತಿದ್ದೆ ಏನೋ. ಆದರೆ ಇದ್ಯಾವುದು ನಮ್ಮ ಕೈಯಲ್ಲಿ ಇರುವುದಿಲ್ಲ. ಹಾಗೆ ನಾನು ಕೂಡ ಗಾಡಿ ಹೋಡಿಸೋದು ಕಲಿಯಬೇಕೆನ್ನುವಂತಾಯಿತು.

ನಮ್ಮ ಬೆಂಗಳೂರು ಟ್ರ್ಯಾಫಿಕ್ ನಲ್ಲಿ ಗಾಡಿ ಓಡಿಸಬೇಕಾದರೆ ನನಗಂತು ಅರೆ ಸಾಹಸವೇ ಮಾಡಬೇಕಾಗುತ್ತದ್ದೆ. ಗಾಡಿ ಕಲಿಯಲು ಶುರು ಮಾಡಿದೆ, ಟ್ರೇನರ್ ದಿನವೂ ಬರಲು ಶುರು ಮಾಡಿದರು, ಈಗೆ ಒಂದು ದಿನ ಬೆಂಗಳೂರು ಟ್ರ್ಯಾಫಿಕ್ ನಲ್ಲಿ ಗಾಡಿಯಲ್ಲಿ ಹೋಗುವಾಗ, FM ನಲ್ಲಿ 'ಜೋಗಿ' ಚಿತ್ರದ 'ಹೊಡಿಮಗ ಹೊಡಿಮಗ' ಹಾಡು ಬರುತ್ತಿತ್ತು. ಆಗ ನನ್ನ ಮನಸ್ಸು ನನ್ನ ಪರಿಸ್ತಿತಿ ಎಲ್ಲವು ಸೇರಿ ಈ ಹಾಡನ್ನು ಬೇರೆ ರೀತಿಯಲ್ಲೇ ರೂಪಿಸಿತು. ಆ ರೀಮಿಕ್ಸ್ ಹಾಡು ಹೀಗಿದೆ:

ನಡಿ ಮಗ, ನುಗ್ಗು ಮಗ, ತೂರ್ಸು ಮಗ, ಏನೇ ಅಗ್ಲಿ ನಿಲ್ಲಿಸ್ ಬೇಡ ಕಾರ್ ನ
ಹಕ್ಕ ಪಕ್ಕ ಯಾರೆ ಬರ್ಲಿ ಇಂದೆ ಮುಂದೆ ಯಾರೆ ಇರ್ಲಿ ನಿಲ್ಲಿಸ್ ಬೇಡ ಕಾರ್ ನ
ಈ ರೋಡ ಮೇಲೆ ಬಂದ ಮೇಲೆ ಸಾವೇ ಕಣೋ
ಈ ಕೈನಲ್ ಸ್ಟಿಯರಿಂಗ್ ಹಿಡಿದ ಮೇಲೆ ಭಯವೇ ಕಣೋ

ಮಗ ಸುತ್ಲು ಗಾಡಿ ಕಣ್ಲಾ, ಬರಿ ಹಾರ್ನ್ ಸೌಂಡೆ ಕಣ್ಲಾ, ಜೊತೆಗ್ ಕಿರ್ಚೊ ಟ್ರೇನರ್ ಕಣ್ಲಾ, ಗಾಡಿ ಸಾವಸ್ ವೆ ಬೇಡ ಅನ್ಸ್ತದ್ ಕಣ್ಲಾ, ತುಂಬ ಭಯ ಆಗ್ತದ್ ಕಣ್ಲಾ, ಆದ್ರು ಮುಂದೆ ಹೋಗ್ಲೆ ಬೇಕು ಕಣ್ಲಾ, ಲೇ...

ಕ್ಲಚ್ಚು ಬ್ರೇಕೂ ಗೇರು ಅಂತ ಏನೇನ್ ಐತ್ಕಣ್ಲಾ
ಅಕ್ಸೆಲ್ರೇಟರ್ ಆಮ್ಕ್ ದ್ರೆ ಸಾಕು ಮುಂದಕ್ ಓಡ್ತಾದ್ ಕಣ್ಲಾ
ಯಾವಗ್ ಕ್ಲಚ್ ಅಮ್ಕೊದು, ಯಾವಗ್ ಬ್ರೇಕ್ ಹಾಕೋದು
ಯಾವಗ್ ಗೇರಾನ್ನ ಚೇಂಜ್ ಮಾಡೋದು...

ನಡಿ ಮಗ, ನುಗ್ಗು ಮಗ, ತೂರ್ಸು ಮಗ, ಏನೇ ಅಗ್ಲಿ ನಿಲ್ಲಿಸ್ ಬೇಡ ಕಾರ್ ನ
ಹಕ್ಕ ಪಕ್ಕ ಯಾರೆ ಬರ್ಲಿ ಇಂದೆ ಮುಂದೆ ಯಾರೆ ಇರ್ಲಿ ನಿಲ್ಲಿಸ್ ಬೇಡ ಕಾರ್ ನ

ಮಗ ಸಕತ್ ಟ್ರ್ಯಾಫಿಕ್ ಕಣ್ಲಾ, ಪ್ರತಿ ರೋಡ್ಗು ಸಿಗ್ನಲ್ ಕಣ್ಲಾ, ರೆಡ್ ನಿಂದ್ ಗ್ರೀನ್ ಸಿಗ್ನಲ್ ಐತು ಕಣ್ಲಾ , ಸಿಗ್ನಲ್ ನಾಗ್ ಗಾಡಿ ನಿನ್ತ್ ಬಿಡ್ತು ಕಣ್ಲಾ, ಎಲ್ರೂ ಬರಿ ರೇಗೋದೆ ಐತು ಕಣ್ಲಾ, ಯಾಕೊ ಟೈಮೆ ಸರಿ ಇಲ್ಲ್ ಕಣ್ಲಾ, ಲೇ...

ಲೋ ಬೀಮ್ ಹೈ ಬೀಮ್ ಅಂತ ಏನೇನ್ ಬೀಮ್ಗಲೈತ್ ಕಣ್ಲಾ
ಲೆಫ್ಟು ರೈಟು ಇಂಡಿಕೇಟರ್ ಮರೀಬೇಡ್ದಂತ್ಕಣ್ಲಾ
ಸೈಡ್ ಮಿರರ್ನೇ ನೋಡ್ಲ, ರಿಯರ್ ವ್ಯೂ ಮಿರರ್ನೇ ನೋಡ್ಲ
ಇಲ್ಲ ಮುಂದೆ ನೋಡ್ಕೊಂಡು ಹೋಡಿಸ್ಲಾ...

ನಡಿ ಮಗ, ನುಗ್ಗು ಮಗ, ತೂರ್ಸು ಮಗ, ಏನೇ ಅಗ್ಲಿ ನಿಲ್ಲಿಸ್ ಬೇಡ ಕಾರ್ ನ
ಹಕ್ಕ ಪಕ್ಕ ಯಾರೆ ಬರ್ಲಿ ಇಂದೆ ಮುಂದೆ ಯಾರೆ ಇರ್ಲಿ ನಿಲ್ಲಿಸ್ ಬೇಡ ಕಾರ್ ನ