Tuesday, December 30, 2008

ತಾಯಿಯೇ ಮೊದಲ ಗುರು


“ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು”, ಈ ಗಾದೆ ಮಾತು ಎಲ್ಲರಿಗು ಗೊತ್ತಿರುವ ವಿಷಯವೆ. ಆದರೆ ಎಷ್ಟು ಜನ ಇದನ್ನು ಒಪ್ಪುತ್ತಾರೋ ಇಲ್ಲವೊ ನನಗೆ ಗೊತ್ತಿಲ್ಲ. ನನ್ನ ವಿಷಯದಲ್ಲಂತು ಈ ಮಾತು ಬಹಳ ಸತ್ಯವಾದದ್ದು. ನನ್ನ ತಾಯಿಯಿಂದ ನಾನು ಕಲಿತ ಪಾಠ ಬಹಳಷ್ಟು. ಅದರಲ್ಲಿ ಬಹು ಮುಖ್ಯ ಪಾಠ ಕಲಿತದ್ದು ದುಡ್ಡಿನ ಮಹತ್ವ. ದುಡ್ಡು ಯಾರಿಗೆ ಬೇಡ ಹೇಳಿ. ಆಗೆ ಅದನ್ನ ಕರ್ಚು ಮಾಡೋದ್ರಲ್ಲೂ ಬಹಳ ಮಂದಿ ಇಂಜರಿಯುವುದಿಲ್ಲ. ಆ ದುಡ್ಡು ನಮ್ಮದಾಗಿರಲಿ ಇಲ್ಲವೆ ಬೇರೆಯವರದ್ಡಾಗಿರಲಿ, ಒಟ್ಟಿನಲ್ಲಿ ಕರ್ಚು ಮಾಡಬೇಕು. ದುಡ್ಡಿನ ಬೆಲೆ ತಿಳಿಯದ ಜನರಲ್ಲಿ ಬಹುಶಹ ನಾನು ಒಬ್ಬಳಾಗಿರುತ್ತಿದ್ದೆನೆನೊ, ನನ್ನ ತಾಯಿಯು ಕಳಿಸಿದ ಪಾಠದಿಂದ ಇಂದು ನನಗೆ ದುಡ್ಡಿನ ಬೆಲೆ ಏನು ಅನ್ನೊ ಅರಿವಿದೆ.

ಆಗ ನಾನು ಒಂದನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಶಾಲೆಯಲ್ಲಿ ಕೆಲವೊಮ್ಮೆ ಶಿಕ್ಷಕರು ಏನಾದರೋ ತಿಂಡಿ(ಸಮೋಸ, ಚಕ್ಕುಲ್ಲಿ, ಚೊಚೋ ಇತ್ಯಾದಿ) ತಂದು ಮಧ್ಯಾನದ ಸಮಯದಲ್ಲಿ ಮಾರುತ್ತಿದ್ದರು. ಬೇಕೆನ್ನುವ ಮಕ್ಕಳು ದುಡ್ಡು ಕೊಟ್ಟು ಆ ತಿಂಡಿ ತೆಗೆದುಕೊಳ್ಳಬಹುದು. ನಮ್ಮ ಮನೆಯಲ್ಲಿ ಪಾಕೆಟ್ ಮನೀ ಅನ್ನೊ ಆಚರವೆಲ್ಲ ಇರಲಿಲ್ಲ. ದುಡ್ಡು ಬೇಕೆಂದಾಗ ಯಾವುದಕ್ಕೆ ಬೇಕು ಎಂದು ಹೇಳಿದರೆ ಮಾತ್ರ ನಮ್ಮ ತಾಯಿ ಹಣ ಕೊಡುತ್ತಿದ್ದರು.

ಹೀಗೆ ಒಮ್ಮೆ ಒಬ್ಬ ಶಿಕ್ಷಕಿ ಚಕ್ಕುಲ್ಲಿ, ಚೊಚೋ ತಿಂಡಿ ತಯಾರಿಸಿ ತಂದಿದ್ದರು. ನನ್ನ ಬಳಿ ದುಡ್ಡಿ ರಲಿಲ್ಲ. ಆ ಶಿಕ್ಷಕಿ, ಇವತ್ತು ತಿಂಡಿ ತೆಗೆದುಕೊಳ್ಳಿ, ನಾಳೆ ಅದರ ದುಡ್ಡು ಕೊಡಿ ಅಂತ ಹೇಳಿದರು. ಅಷ್ಟೇ ಸಾಕಾಗಿತ್ತೇನೋ ನನಗೆ ಗೊತಿಲ್ಲ, ನನ್ನ ಸ್ನೇಹಿತರೊಡನೆ ನಾನು ಕೂಡ ಹೋದೆ, ಒಂದು ಪ್ಲೇಟ್ ಚಕ್ಕುಲ್ಲಿ, ಚೊಚೋ ತೆಗೆದುಕೊಂಡು ತಿಂದೆ. ಆ ಒಂದು ಪ್ಲೇಟ್ ತಿಂಡಿಗೆ 2 ರೂಪಾಯಿಗಳು. ಸರಿ ನಾಳೆ ಅಮ್ಮನ ಹತ್ತಿರ ಈಸ್‌ಕೊಂಡು ಬಂದು ಕೊಟ್ಟರೆ ಆಯಿತು ಎಂದುಕೊಂಡೆ. ಸಾಯಾಂಕಾಲ ಮನೆಗೆ ಹೋದಮೇಲೆ ಅಮ್ಮನಿಗೆ 2 ರೂಪಾಯಿ ಬೇಕು ಎಂದು ಕೇಳಿದೆ. ಅಮ್ಮ ಏನಕ್ಕೆ ಎಂದರು. ಅವರಿಗೆ ನಡೆದ ಸಂಗತಿ ಹೇಳಿದೆ. ಆಗ ನನ್ನ ತಾಯಿ ಯಾರನ್ನು ಕೇಳಿ ತಿಂಡಿ ತಿಂದೆ. ನಿನ್ನ ಬಳಿ ಹಣವಿಲ್ಲದ ಮೇಲೆ ಯಾಕೆ ತಿಂಡಿ ತಗೊಂಡು ತಿಂದೆ. ನಿನ್ನ ಹತ್ತಿರ ದುಡ್ದಿರಬೇಕು, ಆ ದುಡ್ಡು ನಿನ್ನ ಸ್ವಂತ ದುಡಿಮೆಯದ್ದಾಗಿರಬೇಕು, ಆಗ ನಿನಗೆ ಅದನ್ನು ಕರ್ಚು ಮಾಡುವ ಅಧಿಕಾರವಿದೆ. ಅದು ಬಿಟ್ಟು ಇಲ್ಲದ ದುಡ್ಡಲ್ಲಿ ತಿಂದು ಬಂದಿದೀಯಾ, ಸಾಲ ಮಾಡೋದು ಬಹಳ ಸುಲಭ, ಆದರೆ ಅದನ್ನ ತೀರಿಸೋದು ಬಹಳ ಕಷ್ಟ ಎಂದು ಹೇಳಿದರು. ದುಡ್ಡು ಕರ್ಚು ಮಾಡೋರಿಗೆ ಏನು ಗೊತ್ತಾಗುತ್ತದೆ, ಅದ್ದನ್ನ ಸಂಪಾಧನೆ ಮಾಡೋರಿಗೆ ತಾನೆ ಅದರ ಕಷ್ಟ ತಿಳಿಯೋದು. 2 ರೂಪಾಯಿ ಇದ್ದರೆ ಒಂದು ದಿನದ ತರಕಾರಿ ಬರುತ್ತೆ(ಆಗ ತರಕಾರಿ ಬೆಲೆ ಹೀಗಿನಷ್ಟಿರಲಿಲ್ಲವೇನೋ) ಎಂದು ಬೈದರು. ಕೊನೆಗೆ ನಾನಂತೂ 2 ರೂಪಾಯಿ ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡ್ಕೋ ಎಂದು ಹೇಳಿ ಬಿಟ್ಟರು. ನನಗೆ ಏನು ಮಾಡೋದು ತಿಳಿಯಲಿಲ್ಲ. ಆ ಸಮಯದಲ್ಲಿ ನನ್ನ ತಂದೆ ಊರಿನಲ್ಲಿ ಇರಲಿಲ್ಲ. ಮಾರನೆ ದಿನ ಶಾಲೆಗೆ ಹೋದೆ, ಆ ಶಿಕ್ಷಕಿ ತರಗತಿಗೆ ಬಂದು, ನೆನ್ನೆ ತಿಂಡಿ ತೆಗೆದು ಕೊಂಡೋರು 2 ರೂಪಾಯಿ ತಂದಿದ್ದೀರಾ, ತಂದು ಕೊಡಿ ಅಂದ್ರೂ. ಎಲ್ರೂ ಕೊಟ್ರೂ, ಆದ್ರೆ ನಾನು ಮಾತ್ರ ಕೊಡ್ಲಿಲ್ಲ. ನಾಳೆ ತಂದು ಕೊಡ್ತೀನಿ ಅಂದೆ. ದಿನ ಮನೆಗೆ ಹೋಗೋದು, ಅಮ್ಮನಿಗೆ ಕೇಳೋದು. ಅಮ್ಮ ಏನೇ ಆದ್ರೂ ನಾನು ಕೊಡಲ್ಲ, ಏನಾದ್ರೋ ಮಾಡ್ಕೋ ಅಂತ ಒಂದೇ ಮಾತು. ಈ ಕಡೆ ಶಾಲೆಯಲ್ಲಿ ಎಲ್ರೂ ಕೊಟ್ಟಾಗಿತ್ತು, ನನ್ನನ್ನು ಬಿಟ್ಟು. ದಿನವು ಎಲ್ಲರ ಮುಂದೆ ನಿಲ್ಲೊದು, ಆ ಶಿಕ್ಷಕಿ ಕೇಳೋದು, ನಾನು ಇಲ್ಲ ಅನ್ನೋದು. ಹೀಗೆ ಒಂದು ವಾರ ಆಯಿತು. ಕೊನೆಗೆ ಆ ಶಿಕ್ಷಕಿ ನಾಳೆ ತರಲಿಲ್ಲ ಅಂದರೆ ಕ್ಲಾಸ್ ನಿಂದ ಹೊರಗೆ ನಿಲ್ಲಿಸ್ತೀನಿ ಅಂದ್ರು. ಅಮ್ಮನಿಗೆ ಕೇಳಿಕೊಂಡೆ, ಅಮ್ಮ ನಿನಗೆ ದುಡ್ಡಿನ ಬೆಲೆ ಗೊತ್ತಾಗಬೇಕು, ಎಷ್ಟು ಕಷ್ಟ ದುಡ್ಡು ಸಂಪಾದಿಸುವುದು ಅನ್ನೋದು ನಿನಗೆ ತಿಳಿಯಬೇಕು, ಹೊರಗೆ ನಿಲ್ಲಿಸಿದ್ರೆ ನಿಂತ್ಕೋ ಅಂತ ಹೇಳಿದ್ರು. ಮಾರನೆ ದಿನ 1 ಗಂಟೆ ಕಾಲ ನನ್ನನು ಕ್ಲಾಸ್ ನಿಂದ ಹೊರಗೆ ನಿಲ್ಲಿಸಿದ್ರು. ಹೊರಗೆ ನಿಂತು ಬಹಳ ಹತ್ತೆ. ಆ ದಿನ ಮನೆಗೆ ಬಂದೊಡನೆ, ಅಳುತಲ್ಲೇ ಅಮ್ಮನಿಗೆ ಇನ್ಯಾವತ್ತು ಈ ರೀತಿ ಮಾಡೋದಿಲ್ಲ, ಇದೆ ಕೊನೆ. ನನ್ನನ್ನು ಕ್ಷಮಿಸು, ದಯವಿಟ್ಟು ಇದೊಂದು ಸಲ ನನಗೆ 2 ರೂಪಾಯಿ ಕೊಡು, ಇನ್ನು ಮುಂದೆ ಯಾವತ್ತು ಈ ರೀತಿ ಮಾಡೋದಿಲ್ಲ, ದುಡ್ಡನ್ನು ವ್ರತ ಕರ್ಚು ಮಾಡೋದಿಲ್ಲ ಎಂದು ಕೇಳಿಕೊಂಡೆ. ಆಗ ಅಮ್ಮ ನನ್ನ ಕಣ್ಣೊರೆಸಿ, ತಗೋ 2 ರೂಪಾಯಿ ಅಂತ ಕೊಟ್ರೂ. ಅವರು ಒಂದು ಮಾತು ಕೂಡ ಹೇಳಲಿಲ್ಲ. ಬಹುಶಹ ಅವರಿಗೆ ಅನಿಸಿತೇನೋ ನನ್ನ ಮಗಳು ಇಂದು ಒಂದು ಬಹುಮುಖ್ಯ ಪಾಠ ಕಲಿತಳು ಎಂದು.

ಇಂದು ನಾನು ದುಡಿಯುತ್ತಿದ್ದೇನೆ, ದುಡ್ಡನ್ನು ಕರ್ಚು ಸಹ ಮಾಡೊತ್ತಿದ್ದೇನೆ, ಆದರೆ ಕರ್ಚು ಮಾಡುವಾಗ ಅಗತ್ಯ ಕಿಂತ ಹೆಚ್ಚಾಗಿ ಮಾಡೋದಿಲ್ಲ, ಪ್ರತಿ ಸಲವೂ ನನ್ನ ತಾಯಿ ಕಲಿಸಿದ ಆ ಚಿಕ್ಕ ಪಾಠ ನೆನಪಾಗುತ್ತದ್ದೆ. ಇಂದು ನನ್ನ ತಾಯಿ ನನ್ನನ್ನು ಏನು ಕೇಳೋದಿಲ್ಲ, ದುಡ್ಡು ಏನು ಮಾಡ್ತೀಯಾ, ಎಷ್ಟು ಕರ್ಚು ಮಾಡ್ತೀಯಾ, ಒಂದು ಪ್ರಶ್ನೆಯು ಕೇಳೋದಿಲ್ಲ, ಆದರೆ ಅವರು ಕಲಿಸಿದ ಪಾಠ ಹಿಂದಿಗೂ ನಾನು ಮರೆತಿಲ್ಲ, ನಿನ್ನ ಬಳಿ ಹಣವಿರಬೇಕು, ಆಗ ನೀನು ಕರ್ಚು ಮಾಡಬೇಕು, ಹಾಗೆ ನೀನು ಕರ್ಚು ಮಾಡಿದ್ದು ವ್ರತವಾಗಬಾರದು.

ನಿಜಕ್ಕೂ ತಾಯಿಗಿಂತ ಮಿಗಿಲಾದ ದೇವರಿಲ್ಲ, ಗುರುಗಳಿಲ್ಲ. ನನ್ನ ತಾಯಿಯೇ ನನ್ನ ಮೊದಲ ಗುರು.

5 comments:

ವೀರೆಶ ಹಿರೇಮಠ said...

ಹೌದು ವಿಜಿ. ನಿಮ್ಮ ಮಾತು ಸತ್ಯ .

ನಿಮ್ಮಿ ಲೇಖನದಿಂದ ಹತ್ತು ಹದಿನೈದು ವರ್ಷಗಳ ಹಿಂದಿನ ನೆನಪುಗಳು ಕಪ್ಪು ಬಿಳುಪು ಚಿತ್ರಗಳಂತೆ ಒಂದೊಂದಾಗಿ ಮನದ ಬೆಳ್ಳಿತೆರೆಯಲ್ಲಿ ಹಾದು ಹೋದವು.

ಧನ್ಯವಾದಗಳು

ಅನಿಕೇತನ ಸುನಿಲ್ said...

Hi namaste,
Tumba chennagide tamma baraha...
abhinandanegalu..dayavittu barita iri :)
Sunil.

Vijayalakshmi said...

ಧನ್ಯವಾದಗಳು ವೀರೆಶ್ ಮತ್ತು ಸುನಿಲ್. ಹೀಗೆ ಬಂದು ಹೋಗ್ತಾ ಇರಿ.

Anonymous said...

Hi
Very nicely written...
But please take care of kannada..
Too many mistakes...
For Ex. its Kharchu, not karchu .
sampaadane, not sampaadhane .
Chakkuli, not Chakkulli.
I am sorry to point out mistakes... but kannada tappu type aadre odoke himse aagutte...

ವೀರೆಶ ಹಿರೇಮಠ said...

ಹೇಗಿದಿರಿ ವಿಜಿ? ಮುಂದಿನ ಲೇಖನ ಯಾವಾಗ ಬರೆಯುತ್ತಿರಿ?
ಧನ್ಯವಾದಗಳೊಂದಿಗೆ...
-ವೀರೇಶ್