Sunday, June 22, 2008

ನನ್ನ ಪುಟ್ಟ angel

ಮಕ್ಕಳು ದೇವರ ರೂಪ. ಆಗೇ ಏಕೆ ಹೇಳುತ್ತಾರೋ ನನಗೆ ಸರಿಯಾಗಿ ತಿಳಿಯದು, ನನಗೆ ತಿಳಿದ ಮಟ್ಟಿಗೆ ಮಕ್ಕಳು ಕಲ್ಮಷವಿಲ್ಲದವರು, ಮೋಸ, ಅಸೂಯೆ ಇಂತ ಯಾವುದೆ ಕೆಟ್ಟತನ ಇಲ್ಲದವರು. ಮುಗ್ಧ ಮನಸ್ಸಿನವರು. ಎಷ್ಟೇ ನೋವಿರಲಿ, ಈ ಮಕ್ಕಳೊಂದಿಗೆ ಕೆಲವು ಕ್ಷಣ ಕಳೆದರೆ ಸಾಕು, ಎಲ್ಲ ನೋವು ಹೋಗಿ ಮನಸ್ಸಿಗೆ ಸಂತೋಷಸಿಗುತ್ತದೆ.
ನನ್ನ ಪುಟ್ಟ ಜಯಂತನು(ನನ್ನ cousin ಮಗ) ಎಲ್ಲ ಮಕ್ಕಳಂತೆ ಮುಗ್ಧ ಮನಸ್ಸುಳ್ಳ ಮಗು. ಇದು ಸ್ವಲ್ಪ ದಿನಗಳ ಹಿಂದೆ ನಡೆದದ್ದು. ಮನಸ್ಸಿಗೆ ಬಹಳ ಬೇಸರವಾಗಿತ್ತು. ಏನು ಮಾಡಲು ಮನಸ್ಸಿಲ್ಲ. ಸರಿ ಜಯಂತನನ್ನು ನೋಡಿ ಬಹಳ ದಿನಗಳಾಗಿದೆ ಹೋಗಿ ನೋಡಿ ಬರೋಣ ಎಂದು ಹೊರಟೆ. ಆಗ ನನಗೆ ಬಂದ ಯೋಚನೆ, ಬಹಳ ತಿಂಗಳಾಗಿದೆ, ಆ ಪುಟ್ಟ ಮಗುವಿಗೆ(ಅವನಿಗೆ 2 ವರ್ಷ ಇರಬೇಕು) ನನ್ನ ನೆನಪಿರುತ್ತದೆಯೆ ಎಂದು. ಅವರ ಮನೆ ಬಾಗಿಲಿಗೆ ಹೋಗುತ್ತಲ್ಲೇ ಪುಟ್ಟ ಹೆಜ್ಜೆ ಇಡುತ್ತ ಹೊರಗೆ ಓಡಿ ಬಂದ. ನನ್ನನ್ನು ನೋಡುತ್ತಲೆ ನಕ್ಕ. ನನ್ನ ಕೈ ಹಿಡಿದು ಒಳಗೆ ಕರೆದುಕೊಂಡು ಹೋದ. ಅಡಿಗೆ ಮನೆಗೆ ಓಡಿ ಹೋಗಿ, ಅವನ ತಾಯಿಗೆ ಬಾ ಎಂದು ಹೊರಗೆ ಕರೆದುಕೊಂಡು ಬಂದ. ಆಗ ಅವನ ಅಮ್ಮ ಯಾರೋ ಇವರು ನಿನಗೆ ಗೊತ್ತಾ ಎಂದಳು. ಅವನು ನನ್ನ ಬಳಿ ಬಂದು ನಗುತ್ತ ತೊದಲ್ಮಾತಿನಲ್ಲಿ ವಿಜಿ ಎಂದ. ಅದನ್ನು ಕೇಳಿ ಎಂತ ಹುಚ್ಚಿ ನಾನು, ನೆನಪಿರುತ್ತದೆಯೋ ಇಲ್ಲವೋ ಎಂದು ಯೋಚಿಸುತ್ತಿದ್ದೆನಲ್ಲ ಎಂದು ಮನಸ್ಸಿನಲ್ಲಿ ನನಗೆ ನಾನೇ ಬೈದುಕೊಂಡೆ. ಅವನು ತನ್ನ ಆಟದ ಸಾಮಾನುಗಳ್ಳನ್ನು ತಂದು ನನ್ನ ಮುಂದೆ ಇಟ್ಟ. ಅವನ ಜೊತೆ ಕೂತು ಅವನೊಂದಿಗೆ ಆಟವಾಡತೊಡಗಿದೆ. ಅವನ ತೊದಲು ಮಾತುಗಳು, ಮಾತಿಗಿಂತ ಹೆಚ್ಚಾಗಿ action ಮಾಡಿ ಎಲ್ಲವನ್ನು ತೋರಿಸೋದು, ಅವನೊಂದಿಗೆ ಇರೋ ಅಷ್ಟು ಹೊತ್ತು, ಸಮಯ ಕಳೆದದ್ದೆ ಗೊತ್ತಾಗಲಿಲ್ಲ. ಸರಿ ಈಗ ನಾನು ಮನೆಗೆ ಹೋಗುತ್ತೇನೆ ಎಂದು ಎದ್ದು ಹೊರಟೆ, ಕೂಡಲೇ ಅವನು ನನ್ನ ಕೈ ಹಿಡಿದು ಮತ್ತೆ ಒಳಗೆ ಕರೆದು ಕೊಂಡು ಹೋದ. ಯಾಕೋ ಎಂದರೆ action ಮಾಡುತ್ತಲೆ ಊಟ ಮಾಡು ಅಂತ ತೋರಿಸ ತೊಡಗಿದ. ನಾನು ಅದಕ್ಕೆ ಸರಿ ಊಟ ಮಾಡುತ್ತೇನೆ, ಹೋಗಿ ತಟ್ಟೆಗೆ ಊಟ ಹಾಕಿಕೊಂಡು ಬಾ ಎಂದು ಹೇಳಿದೆ. ಅವನು ಅಡಿಗೆ ಮನೆಗೆ ಹೋಗಿ ಅವನ ಅಮ್ಮನಿಗೆ action ಮಾಡುತ್ತ ನನ್ನನ್ನು ತೋರಿಸಿ ಊಟ ಹಾಕಿಕೊಡು ಎಂದ. ಅವನಮ್ಮ ಇನ್ನೂ ಅಡಿಗೆ ಆಗಿಲ್ಲ ಕಣೋ, ಇರು ಸ್ವಲ್ಪ ಒತ್ತು ಎಂದಳು. ಆದರೆ ಅವನು ಸುಮ್ಮನೇ ಇರಲಿಲ್ಲ, ಅಲ್ಲೆ ಕೆಳಗೆ ಇದ್ದ ತಟ್ಟೆಯನ್ನು ತಂದು ನನ್ನ ಮುಂದೆ ಇಟ್ಟ. ಅವನ ಈ ಪ್ರೀತಿ ಕಂಡು, ಅವನೊಂದಿಗೆ ಇನ್ನಷ್ಟು ಕಾಲ ಕಳೆಯಬೇಕೆಂಬ ಆಸೆಯಾಯಿತು. ಅವನಿಗೆ ಸರಿ ನಾನು ಈಗಲೆ ಹೋಗಲ್ಲ, ಇಲ್ಲೆ ಇರ್ತೀನಿ ಅಂದೇ. ಇವನ ಮುಗ್ಧ ಪ್ರೀತಿ ಇಲ್ಲಿಗೆ ಮುಗಿಯಲಿಲ್ಲ. ಅವನೊಂದಿಗೆ ಮಂಚದ ಮೇಲೆ ಕುಳಿತು ಆಡುತ್ತಿದ್ದೆ. ಆಡುತ್ತಾ ನಾನು ಸರಿ ನನಗೆ ಈಗ ನಿದ್ದೆ ಬರುತ್ತಿದೆ ನಾನು ಮಾಲ್ಗುತ್ತೇನೆ ಎಂದು ಅವನ ಪುಟ್ಟ ಕಾಲ ಮೇಲೆ ನನ್ನ ತಲೆ ಇಟ್ಟೆ. ಅವನು ನನ್ನನ್ನು ಎಬ್ಬಿಸಿ, ಅಲ್ಲಿದ್ದ ದಿಂಬಿನ ಬಳಿ ಹೋಗಿ ಇಲ್ಲಿ ತಲೆ ಇಟ್ಟು ಮಲಗಿಕೊ ಎಂದು ತನ್ನ ಪುಟ್ಟ ಕೈನಲ್ಲಿ ತೋರಿಸತೊಡಗಿದ. ನಾನು ಇದರ ಮೇಲೆ ಮಲಗ ಬೇಕಾ, ಸರಿ ಮಲ್ಗ್ತೀನಿ ಎಂದು ಮಲಗಿದೆ. ಆಗ ಅವನು ಅಲ್ಲೇ ಇದ್ದ bedsheet ತೆಗೆಯಲು ಕಷ್ಟ ಪಡುತ್ತಿದ್ದ. ಯಾಕೋ ಮರಿ ಅದು ಎಂದೆ, ಆಗ ಅವನು ತನ್ನ ತೊದಲು ಮಾತಿನೊಂದಿಗೆ action ಮೂಲಕವೆ ಇದ್ದನ್ನು ಹೊದ್ದುಕೊಂಡು ಮಲಗಿಕೊ ಎಂದ. ಈ ಮುಗ್ಧ ಮನಸ್ಸಿನ ಮಗುವಿನ ಪ್ರೀತಿ ಕಂಡು ನನಗೆ ತಿಳಿಯದಂತೆ ನನ್ನ ಕಣ್ತುಂಬಿ ಬಂತು. ಅವನ ಈ ಪ್ರೀತಿ ಬೇಜಾರಾಗಿದ್ದ ನನ್ನ ಮನಸ್ಸಿಗೆ ಅದೆಷ್ಟು ಕುಶಿ ಕೊಟ್ಟಿತ್ತೋ ನನಗೆ ಹೇಳಲು ಅಸಾಧ್ಯ. ಮನೆಯಿಂದ ಹೊರಟಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕರೆ ಸಾಕು ಎಂದು ಹೊರಟ ನನಗೆ, ಪ್ರೀತಿಯ ಸಾಗರವೇ ಸಿಕ್ಕಿತ್ತೇನೋ ಎನಿಸಿತು. ನಿಜವಾಗಿಯು ಮಕ್ಕಳು ದೇವರ ರೂಪವೇ ಇರಬೇಕು. ಮನಸ್ಸಿನಲ್ಲಿ ಎಷ್ಟೇ ನೋವಿರಲಿ, ಎಷ್ಟೇ ಬೇಸರವಾಗಿರಲಿ, ಮಕ್ಕಳೊಂದಿಗೆ ಸ್ವಲ್ಪ ಒತ್ತು ಕಳೆದರೆ ಸಾಕು, ಎಂತ ನೋವೇ ಹಾಗಿರಲಿ ಅದನ್ನು ಕ್ಷಣದಲ್ಲಿ ಮರೆಯುವಂತೆ ಮಾಡುವ ಮನಸ್ಸು, ಶಕ್ತಿ ಈ ಮಕ್ಕಳಲ್ಲಿ ಇದೆ. ಅಂದಿನಿಂದ ವಾರಕ್ಕೆ ಹೊಮ್ಮೆಯಾದರೊ ಈ ನನ್ನ ಪುಟ್ಟ ಜಯಂತನನ್ನು ನಾನು ನೋಡಬೇಕು, ಅವನೊಂದಿಗೆ ಆಟವಾಡಬೇಕು, ನನಗೆ ತಿಳಿಯದಂತೆ ಅವನಲ್ಲಿ ಒಂದು ಅನುಬಂಧ ಬೆಳೆದು ಬಿಟ್ಟಿದೆ, ಪ್ರೀತಿಯ ಬಂದ, ಅವನೊಂದಿಗೆ ಎಷ್ಟು ಕಾಲ ಕಳೆದರು ಕಮ್ಮಿಯೇ ಎನಿಸುತ್ತದ್ದೆ. ಈ ನನ್ನ ಪುಟ್ಟ ಮಗು ಯಾವಾಗಲು ಸಂತೋಷವಾಗಿರಬೇಕು, ಈ ಮುಗ್ಧ ಮನಸ್ಸು ಎಂದಿಗೂ ಕಲ್ಮಷವಾಗಬಾರದು, ಮೋಸ, ಅಸೂಯೆ ಇಂತ ಯಾವುದೆ ಕೆಟ್ತತನ ಅವನ ಬಳಿ ಸುಳಿಯಲುಬಾರದು. ಯಾವಾಗಲು ಅವನು ನಗುತ್ತ ಎಲ್ಲರನ್ನೂ ನಗಿಸುತ್ತಾ ಸುಕವಾಗಿರಬೇಕು ಎಂದು ಆಶಿಸುತ್ತೇನೆ.

3 comments:

ದೀಪಕ said...

ಮಗುವಿನ ಮನಸ್ಸು ನಿಶ್ಕಲ್ಮಷದಿ೦ದ ಕೂಡಿರುತ್ತದೆ ಎನ್ನುವ ನಿನ್ನ ಮಾತು ೧೦೦ಕ್ಕೆ ೧೦೦ ನಿಜ. ಆ ಮಗುವು,ಏನೇ ಮಾಡಲಿ ಅದು ಚೆನ್ನಾಗಿರುತ್ತದೆ.

ಆದರೆ ಒ೦ದು ಮಗುವು ಮಗುವಾಗಿಯೇ ಉಳಿಯುವುದಿಲ್ಲ. ಕಾಲಕ್ರಮೇಣ ಬೆಳವಣಿಗೆ ಹೊ೦ದಬೇಕಾಗಿರುವುದು ಪ್ರಕೃತಿಯ ನಿಯಮ. ಈ ಪ್ರಕ್ರಿಯೆಯಲ್ಲಿ ಹಲವಾರು ಸ೦ದರ್ಭಗಳು ಮತ್ತು
ಸನ್ನಿವೇಶಗಳು ಮಗುವಿನ ನಿಶ್ಕಲ್ಮಷ ಮನಸ್ಸನ್ನು ಕಲುಶಿತಗೊಳಿಸುವ ಸಾಧ್ಯತೆ ಇದೆ.

ಹೀಗೆಯೇ ಇನ್ನಷ್ಟು ಉತ್ತಮ ಲೇಖನಗಳು ಬ್ಲಾಗಿನಲ್ಲಿ ಪ್ರಕಟವಾಗುತ್ತಿರಲಿ.

ಇಂತಿ,

ದೀಪಕ

Vijayalakshmi said...

ನಿಜ ದೀಪಕ್, ಮಕ್ಕಳಾಗಿರುವಾಗ ಇರುವ ಮುಗ್ಧತೆ ದೊಡ್ಡವರಾದಾಗ ಕಾಣಬರುವುದಿಲ್ಲ. ಮಕ್ಕಳು ಬೆಳೆಯುತ್ತಿರುವಂತೆ ಅವರ ಬುದ್ಧಿಯು ಬೆಳೆಯುತ್ತದೆ, ವಿಶಯಗಳ್ಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯು ಬೆಳೆಯುತ್ತದೆ, ಆ ವಿಷಯ ಒಳ್ಳೆಯದೋ, ಕೆಟ್ಟದ್ದೋ ಅರ್ಥ ಮಾಡಿಕೊಂಡ ಮೇಲೆ ಅವರು ಯಾವುದನ್ನು ಅನುಸರಿಸುತ್ತಾರೋ ಅದರ ಮೇಲೆ ಅವರ ವ್ಯಕ್ತಿತ್ವ ರೂಪು ಗೊಳ್ಳುತ್ತದೆ.ನಿನ್ನ ಅನಿಸಿಕೆಗಳಿಗೆ ಧನ್ಯವಾದಗಳು.

ಸಿದ್ಧಾರ್ಥ said...

ಚೆನ್ನಾಗಿದೆ. ಮಕ್ಕಳು ದೇವರಹಾಗೆ ಅಂತ ಹೇಳೋದು ನನಗಂತೂ ಕಷ್ಟ... ಯಾಕೆ ಅಂದ್ರೆ ನಾನು ದೇವರನ್ನ ಇನ್ನೂ ನೋಡೇ ಇಲ್ಲ. ಆದರೆ ಅವನೂ ಮಕ್ಕಳಹಾಗೇ ಇದ್ರೆ ತುಂಬಾ ಚೆನ್ನ :)... ಹೀಗೇ ಬರೀತಾ ಇರು...

- ಸಿದ್ಧಾರ್ಥ