Tuesday, May 17, 2011

ಹೆಣ್ಣು

ಹಿಂದಿನ ಕಾಲದಲ್ಲಿ ಹೆಣ್ಣು ಮನೆಗೆ ಭೂಷಣ, ಅವಳು ಮನೆಕೆಲಸ ಮಾಡಿಕೊಂಡಿರಬೇಕು, ಮನೆಯಲ್ಲಿರಬೇಕು ಎಂದಿತ್ತು. ಓದು ಎನ್ನುವುದು ಹುಡುಗರಿಗೆ ಮಾತ್ರ, ಹುಡುಗಿಯರಿಗೆ ಅಲ್ಲ ಎಂದು ಕೂಡ ಇತ್ತು. ಕಾಲ ಬದಲಾದಂತೆ ಈ ವಿಚಾರ ಬದಲಾಯಿತು. ಇಂದು ಓದು ಎನ್ನುವುದು ಹುಡುಗ, ಹುಡುಗಿ ಇಬ್ಬರಿಗೂ. ಇಂದು ಮಯಿಳೆ ಒಳಗೂ ದುಡುಯುತ್ತಾಳೆ, ಹೊರಗೂ ದುಡುಯುತ್ತಾಳೆ. ಹೆಣ್ಣು ಮಕ್ಕಳು ಓದುವುದ್ದಕ್ಕೆ ಈಗ ಹೆಚ್ಚಿನ ಅಡಚಣೆ ಇಲ್ಲ, ಹೊರಗೆ ದುಡುಯುವುದಕ್ಕು ಅಡಚಣೆ ಇಲ್ಲ, ಆದರೆ ಇಷ್ಟು ಬದಲಾವಣೆ ಸಾಕೆ?

ಹಿಂದೆಯಾದರೋ ಮನೆಯಲ್ಲಿ ಮಾತ್ರ ದುಡಿಮೆ, ಈಗ ಮನೆಯಲ್ಲೂ ದುಡಿಯಬೇಕು, ಹೊರಗು ದುಡಿಯಬೇಕು ಏಕೆಂದರೆ ಈಗಿನ ಕಾಲದಲ್ಲಿ ಇಬ್ಬರು ದುಡಿದರೆ ಮಾತ್ರ ಸಂಸಾರ ನಡೆಸಲು ಸಾಧ್ಯ. ಹೆಣ್ಣು ಮಗಳನ್ನು ಓದಿಸಿದರೆ ಸಾಕೆ, ಅವಳು ದುಡಿಯುವಂತೆ ಆದರೆ ಸಾಕೆ... ಅವಳನ್ನು ಮನುಷ್ಯಳನ್ತೆ ಕಾಣುವುದು ಬೇಡವೇ, ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಬೇಡವೇ. ಕಾಲ ಬದಲಾದಂತೆ ಎಲ್ಲವೂ ಬದಲಾಗುವುದಂತೆ, ಆದರೆ ಇಂದಿಗೂ ಬಹಳಷ್ಟು ಹೆಣ್ಣು ಮಕ್ಕಳು ಶೋಷಣೆಗೆ ಹೊಳಗಾಗುವುದು ತಪ್ಪಿಲ್ಲ. ಏಕೆ ಅನ್ನೋದು ಉತ್ತರಿಸಲಾಗದ ಪ್ರಶ್ನೆ...

ಅದೆಷ್ಟು ಹೆಣ್ಣು ಮಕ್ಕಳು ಪ್ರೀತಿಯಲ್ಲಿ ಮೋಸಹೋದರೋ, ಆ ನೋವು ತಡೆಯಲಾರದೇ ಆತ್ಮಹತ್ಯೆಗೆ ಶರಣಾದವರ ಸಂಖ್ಯೆಯು ಕಡಿಮೆಯೆನಿಲ್ಲ. ಪ್ರೀತಿಸೋದಿಲ್ಲ ಅಂತ ಆಸಿಡ್ ಹಾಕಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ವರದಕ್ಷಿಣೆ ತರಲಾಗಲಿಲ್ಲ ಎಂದು ಕೊಲೆಯಾದವರು ಬಹಳಷ್ಟು, ಕುಡುಕು ಗಂಡನಿಂದ ಕೆಟ್ಟ ಬೈಗುಳ, ಏಟು ತಿಂದಾವರು, ತಿನ್ನೂತಿರುವವರಿಗೆ ಲೆಕ್ಕವೇ ಇಲ್ಲ. ಇಂದು ಕೂಡ ಗಂಡು ಮಗುವಿಗೆ ಜನನ ಕೊಡಬೇಕು, ಹೆಣ್ಣು ಮಗು ಹುಟ್ಟಿದರೆ ಅದು ಶಾಪ, ದರಿದ್ರ, ಬೇಡವಾದ ಭಾರ ಎಂದು ಭಾವಿಸುವವರು ಈ ಲೋಕದಲ್ಲಿ ಇಂದಿಗೂ ಇದ್ದಾರೆ. ಹೆಣ್ಣು ಮಗು ಹುಟ್ಟಿದರೆ ಅದು ಕೋಟಿ ಜನುಮದ ಪುಣ್ಯ, ಅದೃಷ್ಟ ಲಕ್ಷ್ಮಿ ಹುಟ್ಟಿರುವುದು ಎಂದು ಭಾವಿಸುವವರು ಬಹಳ ಕಡಿಮೆ. ಆದರೆ ಹೆಣ್ಣು ಮಗು ಹುಟ್ಟಿದರೆ ಯಾವ ಜನುಮದ ಪಾಪವೋ ಏನೋ, ದರಿದ್ರ ಲಕ್ಷ್ಮಿ ಎಂದು ಭಾವಿಸುವವರೇ ಹೆಚ್ಚು. ಗಂಡು ಹುಟ್ಟಿದರೆ ಎಲ್ಲರಿಗೂ ಸಂತೋಷ, ಅದೇ ಹೆಣ್ಣಾದರೆ ಒಬ್ಬರೆಲ್ಲ ಒಬ್ಬರು 'ಐಯೋ ಹೆಣ್ಣುಮಗೂ, ಛೇ' ಎಂದು ಹೇಳುವವರು ಆ ಮಗುವಿನ ಸುತ್ತ ಇದ್ದೇ ಇರುತ್ತಾರೆ. ಆ ಹೆತ್ತ ತಾಯಿಗೆ ಆ ಪುಟ್ಟ ಕಂದಮ್ಮನಿಗೆ ನೆಮ್ಮದಿಯಾಗಿರಲು ಬಿಡದಂತ ಮನುಷ್ಯ ರೂಪದಲ್ಲಿರುವ ಕ್ರೂರ ಮೃಗಗಳು ಈ ಪ್ರಪಂಚದಲ್ಲಿ ಬಹಳಷ್ಟು ಮಂದಿ ಇದ್ದರೆ.

ಎಷ್ಟು ಓದಿದರೇನು, ಎಂತ ಮೇಲೂ ಕೆಲಸದಲ್ಲಿದ್ದರೇನು, ಹೆಣ್ಣಿಗೆ ನೋವುಂಟು ಮಾಡುವವರು ಇದ್ದೇ ಇದ್ದಾರೆ. ಹೆಣ್ಣಿನ ಮೇಲೆ ಶೋಷಣೆ ಮಾಡುವವರು ಬದುಕಲು ಯೋಗ್ಯರಲ್ಲ. ಹೆಣ್ಣು ಗಂಡು ಎಂದು ಭೇದ ಮಾಡುವವರು ಮನುಷ್ಯರೇ ಅಲ್ಲ. ಗಂಡಾಗಲಿ, ಹೆಣ್ಣಾಗಲಿ ಅದರಲ್ಲಿ ಯಾವ ತಾರತಮ್ಯವೂ ಇಲ್ಲ ಎಂದು ಭಾವಿಸುವವರು ಬಹಳ ಕಡಿಮೆ. ಎಲ್ಲರೂ ಕಾಲ ಬದಲಾಗಿದೆ ಎನ್ನುತ್ತಾರೆ, ಆದರೆ ಹೆಣ್ಣಿಗೆ ಮಾತ್ರ ಎಷ್ಟೇ ಕಾಲ ಬದಲಾದರೂ, ಅವಳನ್ನು ಸಮಾಜ ನೋಡುವ ಪರಿ ಬದಲಾಗಿಲ್ಲ, ಅವಳ ನೋವುಗಳಿಗೆ ಕೊನೆ ಬಂದಿಲ್ಲ.

ಈ ಪ್ರಪಂಚ ಕೊನೆಯದಾಗಲೆ ಹೆಣ್ಣಿನ ನೋವಿಗೆ ಕೊನೆಯಂದು ಕಣ್ಣುತ್ತದೆ.......

1 comment:

ದೀಪಕ said...

ಅರ್ಥಗರ್ಭಿತವಾದ ಲೇಖನ. ಇಲ್ಲಿ ನೀವು ಮರೆತಿರುವುದೆ೦ದರೆ, ಹೆಣ್ಣು ಎಷ್ಟೇ ಕಷ್ಟಪಟ್ಟರೂ, ಅದಕ್ಕೆ ಎಷ್ಟೋ ಬಾರಿ ಇನ್ನೊ೦ದು ಹೆಣ್ಣೂ ಕಾರಣಲಾಗಿರುತ್ತಾಳೆ. ಹೆಣ್ಣು ಮಗು ಹುಟ್ಟಿದರೂ ಮೂದಲಿಸುವುದರಲ್ಲಿ ಹೆಣ್ಣು ಇರುತ್ತಾಳೆ. ವರದಕ್ಷಿಣೆ ವಿಷಯದಲ್ಲಿಯೂ ಕೂಡ.

ಅದಕ್ಕೆ ಹೇಳಿರುವುದಲ್ಲವಾ - 'ಹೆಣ್ಣಿಗೆ ಹೆಣ್ನೇ ಶತ್ರು' ಅ೦ತಾ !

- ದೀಪಕ