Tuesday, November 29, 2011

ಲಗೋರಿ

ಟೀಮ್ ಔಟಿಂಗ್ ಎಂದು ಕ್ಲಬ್ ಕಬಾನ ಹೋಗಿದ್ದೆವು. ಅಲ್ಲಿ ಕೆಲವು ಬೇರೆ ಕಂಪನಿ ಅವರು ಕೂಡ ಬಂದಿದ್ದ ಕಾರಣ ಬ್ಯಾಡ್‌ಮಿಂಟನ್ ಕೋರ್ಟ್, ವಾಲೀಬಾಲ್ ಕೋರ್ಟ್ ಎಲ್ಲದರಲ್ಲೂ ಜನರು ಇದ್ದರು. ಏನು ಮಾಡೋದು ಎಂದಾಗ ನಮ್ಮ ಮ್ಯಾನೇಜರ್ ಲಗೋರಿ ಆಟ ಆಡೋಣ ಎಂದು ಹೇಳಿದರು. ಎಲ್ಲರು ಒಪ್ಪಿದರು. ಅವರಿಗೆ ನನ್ನ ಧನ್ಯವಾದಗಳು. ಬಹಳ ವರ್ಷಗಳ ನಂತರ ಲಗೋರಿ ಆಟ ಆಡುವ ಅವಕಾಶ ಸಿಕ್ಕಿತು.

ಸುತ್ತ ಮುತ್ತಲೆಲ್ಲ ಹುಡುಕಿ ಲಗೋರಿ ಆಟಕ್ಕೆ ಬೇಕಾದ 7 ಕಲ್ಲುಗಳನ್ನು ಹೊಂದಿಸಿದೆವು. ಎರಡು ತಂಡಗಳನ್ನು ಮಾಡಿ ಆಟ ಪ್ರಾರಂಭಿಸಿದೆವು. ಚಂಡನ್ನು ಹೊಡೆದು ಕಲ್ಲು ಬೀಳಿಸಲು ಅರೆ ಸಾಹಸ ಮಾಡಬೆಕಾಹಿತು. ಹೇಗೋ ಕಡೆಗೆ ಕಲ್ಲುಗಳ್ಳನ್ನು ಬೀಳಿಸಿದೆವು. ಎದುರಾಳಿಗಳ ಚಂಡಿನ ಎಸೆತದಿಂದ ಬೀಳುವ ಏಟನ್ನು ತಪ್ಪಿಸಿಕೊಂಡು ಕಲ್ಲುಗಳ್ಳನ್ನು ಮತ್ತೆ ಜೋಡಿಸುವುದು ಮಾತೊಂದು ಕಷ್ಟದ ಕೆಲಸ. ಒಮ್ಮೆ ಕಲ್ಲು ಬೀಳಿಸಿ ಜೋಡಿಸುವ ಸರದಿಯಾದರೆ, ಮತ್ತೊಮ್ಮೆ ಎದುರಾಳಿಗಳ ಮೇಲೆ ಚಂಡು ಒಡೆಯುವ ಸರದಿ. ಲಗೋರಿ ಆಟದಲ್ಲಿ ಸಮಯ ಕಳೆದದ್ದೆ ತಿಳಿಯಲಿಲ್ಲ. ಮತ್ತೆ ನನ್ನ ಬಾಲ್ಯಕ್ಕೆ ಹಿಂತಿರುಗಿದಂತಿತ್ತು. ಬಾಲ್ಯದ ಆಟ ಯಾವಾಗಲು ಚಂದ, ಆ ದಿನಗಳು ಮತ್ತೆ ಬರುವುದಿಲ್ಲ. ಆದರೆ ಈ ರೀತಿ ಕೆಲವೊಮ್ಮೆ ನಮ್ಮ ಮುಂದೆ ಮತ್ತೆ ಮರಳಿದಾಗ, ಮನಸ್ಸಿಗೆ ಏನೋ ಒಂದು ಉಲ್ಲಾಸ, ಸಂತಸ.

ನಾವು ಎಷ್ಟೇ ದೊಡ್ಡವರಾದರು ನಮ್ಮ ಮನಸ್ಸು ಇನ್ನೂ ಬಾಲ್ಯದ ಜೀವನವನ್ನೇ ಇಚ್ಛಿಸುತ್ತದೆ. ಮಕ್ಕಳಂತೆ ಆಡಿ ನಲಿವ ಅವಕಾಶ ಯಾವಾಗಲು ಸಿಗುವುದಿಲ್ಲ, ಈ ರೀತಿ ಸಿಕ್ಕಾಗ ಎಷ್ಟು ಸಂತೋಷ ದೊರೆಯುವುದೋ ಅದು ಹೇಳಲಾಗುವುದಿಲ್ಲ. ಇಂತಾ ಅವಕಾಶ ನನ್ನ ಪಾಲಿಗೆ ತಂದು ಕೊಟ್ಟ ಆ ದೇವರಿಗೆ ನನ್ನ ಧನ್ಯವಾದಗಳು. ಬಾಲ್ಯದ ಸವಿ ಸವೆಯುವ ಅವಕಾಶ ಮತ್ತೆ ಮತ್ತೆ ನಮ್ಮ ಜೀವನದಲ್ಲಿ ಬರುತಿರುಲಿ ಎಂದು ಹಾರೈಸುತ್ತೇನೆ.

No comments: